ಸಲ್ಮಾನ್ ಖಾನ್ ಅವರು ‘ಮಾತೃಭೂಮಿ’ ಸಿನಿಮಾದ ಬಿಡುಗಡೆಗೆ ಸಜ್ಜಾಗಿದ್ದಾರೆ. ಕೆಲವೇ ದಿನಗಳ ಹಿಂದೆ ಈ ಚಿತ್ರದ ಟ್ರೇಲರ್ ಬಿಡುಗಡೆ ಆಯಿತು. ಆ ಬಳಿಕ ಚಿತ್ರತಂಡದವರನ್ನು ಸಲ್ಮಾನ್ ಖಾನ್ ಅವರು ತಮ್ಮ ತೋಟದ ಮನೆಗೆ ಕರೆಸಿಕೊಂಡಿದ್ದಾರೆ. ಚಿತ್ರತಂಡದ ಸದಸ್ಯರಿಗೆ ಲಕ್ಷಾಂತರ ರೂ. ಬೆಲೆಯ ವಾಚ್ ಉಡುಗೊರೆ ನೀಡಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ತಮ್ಮ ಉದಾರ ಸ್ವಭಾವಕ್ಕೆ ಮತ್ತೊಮ್ಮೆ ಹೆಸರುವಾಸಿಯಾಗಿದ್ದಾರೆ. ಬಹುನಿರೀಕ್ಷಿತ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಚಿತ್ರದ ತಾರಾಗಣ ಹಾಗೂ ತಂತ್ರಜ್ಞರಿಗೆ ಸಲ್ಮಾನ್ ಖಾನ್ ಅವರು ಅಚ್ಚರಿಯೊಂದನ್ನು ನೀಡಿದ್ದಾರೆ.