ಬಿಗ್ ಬಾಸ್ ಕನ್ನಡ 13: ಗಾನವಿ ಜೊತೆ ಆಪ್ತವಾಗಿರಲು ಮಂಜ ಪ್ರಯತ್ನಿಸುತ್ತಿದ್ದಾರೆ. ಆ ಪ್ರಯತ್ನದಲ್ಲಿ ಅವರು ಜಗದೀಶ್ ವಿರುದ್ಧ ನಿಂತಿದ್ದಾರೆ. ಜಗದೀಶ್ ಮತ್ತು ಗಾನವಿ ನಡುವಿನ ಜಗಳ ಬಿಡಿಸಲು ಹೋದ ಮಂಜ ಅವರು ಗಾನವಿಯ ಪರ ವಹಿಸಿದ್ದಾರೆ. ಈ ವೇಳೆ ಅವರು ಜಗದೀಶ್ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಮಂಜ ಅವರು ಕೆಟ್ಟ ಮಾತುಗಳ ಮೂಲಕವೇ ಕುಖ್ಯಾತಿ ಪಡೆದವರು. ಆ ಕಾರಣದಿಂದಲೇ ಅವರು ಈ ಮೊದಲು ಎಲಿಮಿನೇಟ್ ಆಗಿದ್ದರು. ಆದರೆ ಅವರಿಗೆ ಎರಡನೇ ಅವಕಾಶ ನೀಡಿ ಮತ್ತೆ ಬಿಗ್ ಬಾಸ್ ಮನೆಗೆ ಕಳಿಸಲಾಗಿದೆ. ಆದರೂ ಕೂಡ ಅವರು ಮತ್ತೆ ಹಳೇ ಬುದ್ಧಿ ಮುಂದುವರಿಸಿದ್ದಾರೆ.