ತಮ್ಮ ಕುಟುಂಬದ ಸದಸ್ಯರ ಕುರಿತು ಪ್ರಚಲಿತದಲ್ಲಿದ್ದ 'ಅವಾಸ್ತವಿಕ' ಮತ್ತು ಸತ್ಯಕ್ಕೆ ದೂರವಾದ ಕತೆಗಳಿಂದ ತನಗೆ ತೀವ್ರ ನೋವಾಗಿತ್ತು. ಹೀಗಾಗಿ, ಸತ್ಯಾಂಶವನ್ನು ದಾಖಲಿಸುವ ಉದ್ದೇಶದಿಂದಲೇ ತಾನು ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಎಂಬ ಆತ್ಮಕತೆಯನ್ನು ಬರೆದಿರುವುದಾಗಿ ಸೋನಿಯಾ ಗಾಂಧಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ಸೋಮವಾರ ನಡೆದ ತಮ್ಮ ಆತ್ಮಕಥೆಯ ಅಧಿಕೃತ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಪುಸ್ತಕ ರಚನೆಯ ಹಿಂದಿನ ಭಾವನಾತ್ಮಕ ಕಾರಣಗಳು, ಭಾರತಕ್ಕೆ ಬಂದ ಆರಂಭಿಕ ದಿನಗಳ ಸವಾಲುಗಳು ಹಾಗೂ ಓದುಗರ ಪ್ರತಿಕ್ರಿಯೆಯ ಕುರಿತು ಮುಕ್ತವಾಗಿ ಮಾತನಾಡಿದರು.