ಎಪಿಎಂಸಿ ಮಾರುಕಟ್ಟೆಗಳಲ್ಲಿ ತೂಕದಲ್ಲಿ ರೈತರಿಗೆ ಮೋಸ ಮಾಡುವ ಪ್ರಕರಣಗಳು ನಡೆಯುತ್ತಲೇ ಇವೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಆಹಾರ, ನಾಗರೀಕ ಪೂರೈಕೆ ಗ್ರಾಹಕ ವ್ಯವಹಾರ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಕರ್ನಾಟಕದಾದ್ಯಂತ ಕಾರ್ಯಚರಣೆ ನಡೆಸಿ 275 ಪ್ರಕರಣ ದಾಖಲಿಸಿದೆ. ಇದರೊಂದಿಗೆ ಎಪಿಎಂಸಿ ಮಾರುಕಟ್ಟೆಗಳಲ್ಲಿ ತೂಕದಲ್ಲಿ ಮೋಸಕ್ಕೆ ಇನ್ನು ಅವಕಾಶವಿಲ್ಲ ಎಂಬ ಸಂದೇಶ ರವಾನಿಸಿದೆ. ಬೆಂಗಳೂರು, (ನವೆಂಬರ್ 16): ಆಹಾರ, ನಾಗರೀಕ ಪೂರೈಕೆ, ಗ್ರಾಹಕ ವ್ಯವಹಾರ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಮಹತ್ವಾಕಾಂಕ್ಷಿ 'ಮಿಷನ್ ನಿಖರ' ನ ಮುಂದುವರೆದ ಭಾಗವಾಗಿ ಇಲಾಖೆಯ ಅಧಿಕಾರಿಗಳು ಸೋಮವಾರ ಮುಂಜಾನೆ ರಾಜ್ಯಾದ್ಯಂತ ಒಂಬತ್ತು (9) ಪ್ರಮುಖ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಏಕಕಾಲಕ್ಕೆ ತಪಾಸಣೆ ನಡೆಸಿದೆ.