ಬಿಗ್ ಬಾಸ್ ಮನೆಯಲ್ಲಿ ಸೌಂದರ್ಯಾ ಶೆಟ್ಟಿ ಭಾರಿ ಆತ್ಮವಿಶ್ವಾಸ ಹೊಂದಿದ್ದರು. ಆದರೆ ಅವರಿಗೆ ಈಗ ಮುಖಭಂಗ ಆಗಿದೆ. ಒಟ್ಟು 8 ಪುರುಷ ಸದಸ್ಯರು ಸೌಂದರ್ಯಾ ಶೆಟ್ಟಿ ಬಗ್ಗೆ ನೆಗೆಟಿವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವಾರ ಮಹಾರಾಣಿ ಆಗಲು ಸೌಂದರ್ಯಾ ಶೆಟ್ಟಿಗೆ ಅರ್ಹತೆ ಇಲ್ಲ ಎಂದು ಎಲ್ಲರೂ ಟೀಕೆ ಮಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ 8 ಪುರುಷರು ಹಾಗೂ 3 ಮಹಿಳಾ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಆ ಮೂವರು ಮಹಿಳಾ ಸ್ಪರ್ಧಿಗಳನ್ನು ಯುವರಾಣಿಯರು ಎಂದು ಕರೆಯಲಾಗಿದೆ. ಅವರ ಪೈಕಿ ಒಬ್ಬರನ್ನು ಮಹಾರಾಣಿ ಎಂದು ಆಯ್ಕೆ ಮಾಡಲು ಚಟುವಟಿಕೆ ನೀಡಲಾಗಿದೆ.