ಗುತ್ತಲ: ಮನುಷ್ಯರಾಗಿ ಹುಟ್ಟುವುದಕ್ಕಿಂತ ಮನುಷ್ಯತ್ವದ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕುವುದು ಮುಖ್ಯ. ಬಸವಣ್ಣನವರ ಕಾಯಕ, ದಾಸೋಹ ಮತ್ತು ಸಮಾನತೆಯ ತತ್ವಗಳನ್ನು ಜೀವನದಲ್ಲಿ ಪಾಲಿಸಿದಾಗ ಮಾತ್ರ. ಬಸವಣ್ಣನವರ ತತ್ವಾದರ್ಶಗಳನ್ನು ಇಂದಿನ ಪೀಳಿಗೆಗೂ ಪರಿಚಯಿಸುವ ಉದ್ದೇಶದಿಂದ ಸಂಗನಬಸವ ಸ್ವಾಮೀಜಿ ಸಂಕಲ್ಪಿಸಿದ್ದ 21 ಅಡಿ ಏಕಶಿಲಾ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯವನ್ನು ಗುರುಸಿದ್ಧ ಸ್ವಾಮೀಜಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಿರುವುದು ಮಹತ್ವದ ಸಾಧನೆ ಎಂದು ಶ್ಲಾಘಿಸಿದರು. ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಗುತ್ತಲ ಮತ್ತು ಅಗಡಿ ಮಠಗಳಿಗೆ ರುದ್ರಮುನಿ ಶಿವಯೋಗಿಗಳೇ ಮಠಾಧೀಶರಾಗಿದ್ದರು. ಅವರು ಲಿಂಗಪೂಜಾನಿಷ್ಠರಾಗಿದ್ದು, ಆರೇಳು ಗಂಟೆಗಳ ಕಾಲ ಲಿಂಗ ಪೂಜೆಯಲ್ಲಿ ಲೀನರಾಗಿರುತ್ತಿದ್ದರು.