ಪೊಂಟಿಯಾನಕ್: ಇಂಡೋನೇಷ್ಯಾದ ಜಿಮ್ ಒಂದರಲ್ಲಿ ಟ್ರೆಡ್ಮಿಲ್ ಮೇಲೆ ವ್ಯಾಯಾಮ ಮಾಡುತ್ತಿದ್ದ 22 ವರ್ಷದ ಯುವತಿಯೊಬ್ಬಳು, ಸಮತೋಲನ ಕಳೆದುಕೊಂಡು ಮೂರನೇ ಮಹಡಿಯಿಂದ ಕೆಳಗೆ ಬಿದ್ದು ದಾರುಣವಾಗಿ ಮೃತಪಟ್. ಈ ಭೀಕರ ಅಪಘಾತದ ದೃಶ್ಯ ಜಿಮ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾನಲ್ಲಿ ಸಕ್ಕತ್ ವೈರಲ್ ಆಗುತ್ತಿದೆ. ಈ ದುರಂತ ಘಟನೆ ಇಂಡೋನೇಷ್ಯಾದ ಪೊಂಟಿಯಾನಕ್ ಎಂಬಲ್ಲಿ ನಡೆದಿದೆ. 22 ವರ್ಷದ ಯುವತಿಯೊಬ್ಬಳು ಎಂದಿನಂತೆ ವರ್ಕೌಟ್ ಮಾಡಲು ಜಿಮ್ಗೆ ತೆರಳಿದ್ದರು. ಜಿಮ್ನ ಮೂರನೇ ಮಹಡಿಯಲ್ಲಿ ಇಡಲಾಗಿದ್ದ ಟ್ರೆಡ್ಮಿಲ್ ಮೇಲೆ ಆಕೆ ಓಡುತ್ತಾ ವ್ಯಾಯಾಮ ಮಾಡುತ್ತಿದ್ದರು. ಸ್ವಲ್ಪ ಸಮಯದ ನಂತರ, ಬೆವರು ಒರೆಸಿಕೊಳ್ಳಲು ಆಕೆ ಟವೆಲ್ ತೆಗೆದುಕೊಳ್ಳಲು ಮುಂದಾಗಿದ್ದಾರೆ.ಆದರೆ, ಈ ವೇಳೆ ಟ್ರೆಡ್ಮಿಲ್ ವೇಗವಾಗಿ ಚಲಿಸುತ್ತಲೇ ಇತ್ತು.