ಪುತ್ತೂರು: ಬಿಸಿಯೂಟಕ್ಕೆ ನೇಮಕ ಮಾಡಿದವರಿಗೆ ಸರ್ಕಾರ ಸರಿಯಾಗಿ ವೇತನ ನೀಡುತ್ತಿಲ್ಲ. ಈಗ ಕೆಲಸವನ್ನು ಖಾಸಗೀಕರಣ ಮಾಡಲು ಮುಂದಾಗಿದೆ. ರಾಜಕಾರಣಿಗಳು ಐಶಾರಾಮಿ ಜೀವನ ನಡೆಸುವ ಮೂಲಕ ಸಾಮಾನ್ಯರ ಮೇಲೆ. ರಾಜಕಾರಣಿಗಳು ಐಶಾರಾಮಿ ಜೀವನ ನಡೆಸುವ ಮೂಲಕ ಸಾಮಾನ್ಯರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ತಳಹಂತದ ಜನರ ನೋವು ತಿಳಿಯದ ಜನಪ್ರತಿನಿಽಗಳ ಅವಶ್ಯಕತೆಯೇನಿದೆ? ಖಾಸಗೀಕರಣ ಹುನ್ನಾರ ತಡೆದು, ವೇತನ ಭದ್ರತೆ ಒದಗಿಸುವಂತೆ ಆಗ್ರಹಿಸಿ ಪುತ್ತೂರು ಮತ್ತು ಕಡಬ ತಾಲೂಕು ಅಕ್ಷರ ದಾಸೋಹ ನೌಕರರ ಸಂಘದ ವತಿಯಿಂದ ಪುತ್ತೂರು ಸಹಾಯಕ ಆಯುಕ್ತರ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಜಿಲ್ಲಾ ಅಕ್ಷರ ದಾಸೋಹ ಸಂಘದ ಉಪಾಧ್ಯಕ್ಷೆ ಈಶ್ವರಿ ಪದ್ಮುಂಜ ಮಾತನಾಡಿ, ಬಿಸಿಯೂಟ ತಯಾರಿಸುವವರ ಪರ ಗಟ್ಟಿಧ್ವನಿ ಮೊಳಗಬೇಕಿದೆ.