ಹಾಸನ: ಜೀವನದಲ್ಲಿ ಎದುರಾಗುವ ಆರಂಭಿಕ ಸೋಲುಗಳಿಗೆ ಎದೆಗುಂದದೆ, ಆತ್ಮವಿಶ್ವಾಸ, ಶ್ರದ್ಧೆ ಹಾಗೂ ನಿರಂತರ ಪ್ರಯತ್ನದ ಮೂಲಕ ಯಶಸ್ಸಿನ ಗುರಿ ತಲುಪಬೇಕು ಎಂದು ಇನ್ಫೋಸಿಸ್ ಸಂಸ್ಥೆಯ ಹಿರಿಯ ಪ್ರಧಾನ ಸಲ. ಆದರೆ, ಆ ಸೋಲುಗಳಿಂದ ಧೃತಿಗೆಡದೆ ತಪ್ಪುಗಳನ್ನು ಸರಿಪಡಿಸಿಕೊಂಡು ಮೂರನೇ ಸಂದರ್ಶನದಲ್ಲಿ ಯಶಸ್ಸು ಸಾಧಿಸಿದೆ. ನಂತರ ಆರು ವರ್ಷಗಳ ಕಾಲ ಬೋಧನಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ಅನುಭವಗಳಿಸಿದ ಬಳಿಕ ಇನ್ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗಾವಕಾಶ ಪಡೆದುಕೊಂಡೆ ಎಂದರು.ಅಂಕಗಳು, ಪದವಿಗಳಷ್ಟೇ ಯಶಸ್ಸಿನ ವಾನದಂಡಗಳಲ್ಲ. ಕಲಿಯುವ ಆಸಕ್ತಿ, ಕೌಶಲಗಳ ನಿರಂತರ ಅಭಿವೃದ್ಧಿ, ಸಮಯಪ್ರಜ್ಞೆ ಹಾಗೂ ಸವಾಲುಗಳನ್ನು ಎದುರಿಸುವ ಮನೋಭಾವ ಅಷ್ಟೇ ಮುಖ್ಯ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟು ನಿರಂತರವಾಗಿ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.ಪ್ರಾಂಶುಪಾಲ ಡಾ.