ನೈಋತ್ಯ ರೈಲ್ವೆಯ ಅಧಿಸೂಚನೆ ಪ್ರಕಾರ, ಮಂಗಳೂರು ಕೇಂದ್ರ ರೈಲು ನಿಲ್ದಾಣದಿಂದ ಕೇರಳ, ತಮಿಳುನಾಡು ಹಾಗೂ ಗೋವಾ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರೈಲುಗಳ ಸಂಖ್ಯೆಗಳು ಬದಲಾಗಲಿವೆ. 3 Min Read ಮಂಗಳೂರು: 2027ರ ಜನವರಿ 1ರಿಂದ ಹೊಸ ಆದೇಶದ ಪ್ರಕಾರ ಮಲಬಾರ್, ಮಾವೇಲಿ, ಪರಶುರಾಮ್, ವಂದೇ ಭಾರತ್ ಸೇರಿ ಹಲವು ರೈಲುಗಳ ಸಂಖ್ಯೆಗಳು ಪರಿಷ್ಕರಣೆಯಾಗಲಿವೆ. ಹಾಗೆಯೇ, ಮಂಗಳೂರು-ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್ ರೈಲುಗಳ ಸಂಖ್ಯೆಯೂ ಬದಲಾಗಲಿದೆ. ಮಂಗಳೂರು ರೈಲ್ವೆ ಪ್ರದೇಶವನ್ನು ನೈಋತ್ಯ ರೈಲ್ವೆಯೊಂದಿಗೆ ವಿಲೀನಗೊಳಿಸಿದ ಬೆನ್ನಲ್ಲೇ ಮಂಗಳೂರು ವ್ಯಾಪ್ತಿಯಲ್ಲಿ ಸಂಚರಿಸುವ ಹಲವು ಪ್ರಮುಖ ರೈಲುಗಳ ಸಂಖ್ಯೆಗಳನ್ನು ಪರಿಷ್ಕರಿಸಲಾಗಿದೆ.