ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದ ಅಗ್ನಿಕುಲ್ ಕಾಸ್ಮೋಸ್ ಕಂಪನಿಯು ಭೂಮಿಯ ಸುತ್ತ ಸುತ್ತುವ ಡಾಟಾ ಸೆಂಟರ್ಗಳನ್ನು ನಿರ್ಮಿಸುತ್ತಿದೆ. ಮರುಬಳಕೆ ಮಾಡಬಹುದಾದ ರಾಕೆಟ್ಗಳನ್ನೂ ಸಂಸ್ಥೆ ಅಭಿವೃದ್ಧಿಪಡಿಸಲಿದೆ. ಈ ಡಾಟಾ ಸೆಂಟರ್ ಮತ್ತು ರೀಯೂಸಬಲ್ ರಾಕೆಟ್ ನಿರ್ಮಿಸಲು ಆಂಧ್ರದಲ್ಲಿ ಒಂದು ಘಟಕ ಸ್ಥಾಪಿಸುತ್ತದೆ. ಅದಕ್ಕಾಗಿ ಆಂಧ್ರ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಹೈದರಾಬಾದ್, ನವೆಂಬರ್ 16: ಬಾಹ್ಯಾಕಾಶದಲ್ಲಿ ಡಾಟಾ ಸೆಂಟರ್ಗಳನ್ನು ಸ್ಥಾಪಿಸುವ ಕುರಿತು ಚರ್ಚೆಗಳು ಹೆಚ್ಚುತ್ತಿರುವ ಮಧ್ಯೆ ಭಾರತದ ಅಗ್ನಿಕುಲ್ ಕಾಸ್ಮೋಸ್ (Agnikul Cosmos) ಕಂಪನಿ, ಅಂಥದ್ದೊಂದು ಪ್ರಯತ್ನಕ್ಕೆ ಸ್ವತಃ ಕೈಹಾಕಲು ಯೋಜಿಸಿದೆ. ಭೂಕಕ್ಷೆಯಲ್ಲಿ ಸುತ್ತಬಲ್ಲಂತಹ ಡಾಟಾ ಸೆಂಟರ್ಗಳನ್ನು ಆಗಸಕ್ಕೆ ಕಳುಹಿಸಲಿದೆ ಈ ಕಂಪನಿ.