ಇಟಲಿಯ ಪುಟ್ಟ ಪಟ್ಟಣವಾದ ಲೂಸಿಯಾನಾದಲ್ಲಿ ಜನಿಸಿದ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರನ್ನು ಭೇಟಿಯಾದ ಕ್ಷಣದಿಂದ ಹಿಡಿದು, ವಿವಾಹದ ನಂತರ ಭಾರತಕ್ಕೆ ಬಂದು ಇಲ್ಲಿನ ಸಂಸ್ಕೃತಿ, ಭಾಷೆ ಮತ್ತು ಜನಜೀವನದೊಂದಿಗೆ ಒಂದಾದ ಆತ್ಮೀಯ ಅನುಭವಗಳನ್ನು ಈ ಕೃತಿಯಲ್ಲಿ ಹಂಚಿಕೊಂಡಿದ್ದಾರೆ. ಗಾಂಧಿ ಕುಟುಂಬದ ಸೊಸೆಯಾಗಿ ಅತ್ತೆ ಇಂದಿರಾ ಗಾಂಧಿ ಅವರೊಂದಿಗಿನ ಒಡನಾಟ, ರಾಜೀವ್ ಗಾಂಧಿ ಅವರೊಂದಿಗಿನ ಪ್ರೇಮ ಮತ್ತು ದಾಂಪತ್ಯ ಜೀವನ, ಬಳಿಕ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹತ್ಯೆಗಳಂತಹ ಘೋರ ದುರಂತಗಳನ್ನು ಎದುರಿಸಿದ ರೀತಿಯನ್ನು ಪುಸ್ತಕದಲ್ಲಿ ವಿವರಿಸಲಾಗಿದೆ.