ಸಾರಿಗೆ ಇಲಾಖೆಯಲ್ಲಿ 12 ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳಿಗೆ ನಕಲಿ ದಾಖಲೆ ನೀಡಿ 46 ಸಿಬ್ಬಂದಿಗಳು ಮುಂಬಡ್ತಿ ಪಡೆಯಲು ಯತ್ನಿಸಿದ್ದಾರೆ. ಅಧಿಕಾರಿಗಳು ನಿಯಮಗಳನ್ನೇ ಬದಲಾಯಿಸಿದ್ದು, ಕೋಟಿ ಡೀಲ್ ಆರೋಪ ಕೇಳಿಬಂದಿದೆ. ಟಿವಿ9 ವರದಿ ಬೆನ್ನಲ್ಲೇ ಶೋಕಾಸ್ ನೋಟಿಸ್ ನೀಡಲು ಸಾರಿಗೆ ಸಚಿವ ಭೈರತಿ ಸುರೇಶ್ ಸೂಚಿಸಿದ್ದಾರೆ. ಬೆಂಗಳೂರು, ನವೆಂಬರ್ 16: ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ಮುಂಬಡ್ತಿ ಪಡೆಯಲು ಯತ್ನಿಸಿರುವ ಆರೋಪ ಕೇಳಿಬಂದಿದೆ. ಸಾರಿಗೆ ಇಲಾಖೆಯ ಅಕ್ರಮವನ್ನು ಟಿವಿ9 ಬಯಲು ಮಾಡಿತ್ತು.