ಉದ್ಯೋಗ ಸಂದರ್ಶನಕ್ಕೆ ಹೋದ ವೇಳೆ ಕಹಿ ಅನುಭವ ಆಗೋದಿದೆ. ಇದೀಗ ಈ ಯುವತಿಗೂ ಅದೇ ರೀತಿಯಾಗಿದೆ. ಜೂನಿಯರ್ ವಿಶ್ಲೇಷಕ ಹುದ್ದೆಯ ಸಂದರ್ಶನದ ವೇಳೆ ಕಂಪನಿಯು ಸ್ಪ್ಯಾನಿಷ್ ಮಾತನಾಡಲು ಹಾಗೂ ಬಲವಂತವಾಗಿ ಎಐ ಕೋರ್ಸ್ ಅನ್ನು ಪೂರ್ಣಗೊಳಿಸಲು ಒತ್ತಡ ಹೇರಿದ್ದಾರೆ. ಕಂಪನಿ ಮ್ಯಾನೇಜರ್ ಹೀಗೆ ನಡೆದುಕೊಳ್ಳುತ್ತಿದ್ದಂತೆ ಹಿಂದೆ ಮುಂದೆ ನೋಡದೇನೇ ಯುವತಿ ಜಾಬ್ ರಿಜೆಕ್ಟ್ ಮಾಡಿದ್ದಾಳೆ. ಈ ರೆಡ್ಡಿಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.