ಐಐಟಿ ಮದ್ರಾಸ್ನ ಕಂಪ್ಯೂಟರ್ ಸೈನ್ಸ್ ಬಿಟೆಕ್ ವಿದ್ಯಾರ್ಥಿ ಧರ್ಮತೇಜ ರೆಡ್ಡಿ ನೆದರ್ಲ್ಯಾಂಡ್ಸ್ ಮೂಲದ ಐಎಂಸಿ ಕಂಪನಿಯಲ್ಲಿ ವಾರ್ಷಿಕ 2 ಕೋಟಿ ರೂ ಪ್ಯಾಕೇಜ್ನ ಕೆಲಸ ಪಡೆದಿದ್ದಾರೆ. ಆಂಧ್ರದ ಕಡಪ ಜಿಲ್ಲೆಯ ಈ ಯುವಕ ಮುಂಬೈ ಕ್ಯಾಂಪಸ್ ಸಂದರ್ಶನದಲ್ಲಿ ತನ್ನ ಪ್ರತಿಭೆಯನ್ನು ತೋರಿಸಿದ್ದಾನೆ. ಸಾಫ್ಟ್ವೇರ್ ಕ್ಷೇತ್ರದಲ್ಲಿ ಇನ್ನೂ ವಿಫುಲ ಅವಕಾಶಗಳಿವೆ ಎನ್ನುವುದನ್ನು ಕಾಣಬಹುದು. ಮುಂಬೈ, ನವೆಂಬರ್ 16: ತಂತ್ರಜ್ಞಾನ ಕ್ಷೇತ್ರದಲ್ಲಿ ಸಿಕ್ಕಾಪಟ್ಟೆ ಲೇ ಆಫ್ ನಡೆಯುತ್ತಿದ್ದರೂ ಕಂಪನಿಗಳಿಂದ ದುಬಾರಿ ಹೈರಿಂಗ್ ನಿಂತಿಲ್ಲ. ಕ್ಯಾಂಪಸ್ ಸಂದರ್ಶನಗಳಲ್ಲಿ ಆಯ್ಕೆಯಾಗುವ ಪ್ರತಿಭಾನ್ವಿತ ಎಂಜಿನಿಯರುಗಳಿಗೆ ಸಖತ್ ಸಂಬಳದ ಆಫರ್ಗಳು ಹರಿದುಬರುತ್ತಿರುತ್ತವೆ. ಗೂಗಲ್ ಇತ್ಯಾದಿ ಸಂಸ್ಥೆಗಳು ಆಯ್ದ ಕಾಲೇಜುಗಳಿಗೆ ಹೋಗಿ ಪ್ರತಿಭಾನ್ವಿತರನ್ನು ಹೆಕ್ಕಿ ಕೈತುಂಬ ಸಂಬಳದ ಆಫರ್ ಕೊಡುತ್ತವೆ.