ಮಾಣಿಕ್ಯ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಅಮೀನಗಡ : ಶಿಕ್ಷಕ ವತ್ತಿಯ ಮೂಲಕ ದಶಕಗಳ ಕಾಲ ಶೈಕ್ಷಣಿಕ ಹಾಗೂ ನೈತಿಕ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿದ ನಿವತ್ತ ಉಪಪ್ರಾಚಾರ್ಯ ಆರ್.ಜಿ. ಸನ್ನಿ ಅವರ ಬದುಕು ಮತ್ತು ಸೇವೆ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿದಾಯಕ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು. ಪಟ್ಟಣದ ಪ್ರಭುಶಂಕರೇಶ್ವರ ಅನುಭವ ಮಂಟಪದಲ್ಲಿ ಸಂಗಮೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಅಭಿನಂದನಾ ಸಮಿತಿ ಭಾನುವಾರ ಆಯೋಜಿಸಿದ್ದ ಆರ್.ಜಿ. ಸನ್ನಿ ಅವರ ಜನ್ಮ ಷಷ್ಟೃಬ್ದಿ ಆಚರಣೆ ಮತ್ತು ಮಾಣಿಕ್ಯ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.