ಸಂತೋಷ ಮುರಡಿ ಮುಂಡರಗಿಪಟ್ಟಣದ ಹೊರವಲಯದಿಂದ ಯಕ್ಲಾಸಪೂರ ರಸ್ತೆ ಬದಿಯಲ್ಲಿ ಸಮೃದ್ಧವಾಗಿ ಬೆಳೆದು ನಿಂತಿರುವ ಗಿಡಗಳ ಮಧ್ಯೆ ನೀರಾವರಿ ಇಲಾಖೆಯಿಂದ ವಿದ್ಯುತ್ ಕಂಬಗಳನ್ನು ಅಳವಡಿಸಿದ್ದು, ಅದರಿಂದ ಗಿ. ಅವು ಸಮೃದ್ಧಿಯಾಗಿ ಬೆಳೆದ ನಂತರ ನಿರ್ವಹಣೆಗಾಗಿ ವಲಯ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.ಪರಿಸರಕ್ಕೆ ಪೂರಕವಾಗಿರುವ ಆಮ್ಲಜನಕ ಉತ್ಪತ್ತಿ ಮಾಡುವ ಮತ್ತು ಗಾಳಿಯನ್ನು ಶುದ್ಧೀಕರಿಸುವ ಇಂತಹ ಗಿಡ-ಮರಗಳ ಮಧ್ಯದಲ್ಲಿ ನೀರಾವರಿ ಇಲಾಖೆಯಿಂದ ಹನಿ ನೀರಾವರಿ ಯೋಜನೆಗೆ ವಿದ್ಯುತ್ ಸಂಪರ್ಕಕ್ಕಾಗಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ವಿದ್ಯುತ್ ಕಂಬ ಅಳವಡಿಕೆಗೆ ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಪರಿಣಾಮ ವಿದ್ಯುತ್ಲೈನ್ ಎಳೆಯುವ ಕಾರ್ಯ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.