ಕನಕಗಿರಿ: ಐವರ ದಲಿತ ವ್ಯಕ್ತಿಗಳ ಮೇಲೆ ವಾಮಾಚಾರ ಮಾಡಿರುವ ಘಟನೆ ತಾಲೂಕಿನ ಕಲಿಕೇರಿ ಗ್ರಾಮದ ಸ್ಮಶಾನದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಐವರು ದಲಿತರ ಮೇಲೆ ವಾಮಾಚಾರ ದೀಪಾವಳಿ ಅಮಾವಾಸ್ಯೆ ದಿನ ರಾತ್ರಿ ವೇಳೆ ದಲಿತ ಸಮುದಾಯಕ್ಕೆ ಸೇರಿದ ಐವರ ಮೇಲೆ ಹಾಗೂ ಟ್ರ್ಯಾಕ್ಟರ್ ಮತ್ತು ಬೈಕ್ಗಳ ಫೋಟೋ ಇಟ್ಟು, ಕಪ್ಪು ಬಟ್ಟೆಯಲ್ಲಿ ಗೊಂಬೆ ಮಾಡಿದ್ದು, ಗಜಗ, ಜಾಜಿಕಾಯಿ, ನಿಂಬೆಹಣ್ಣನ್ನು ಕಂಬಳಿ ಮೇಲೆ ಇಟ್ಟು ವಾಮಾಚಾರ ಮಾಡಿದ್ದಾರೆ. ಈ ವಾಮಾಚಾರವನ್ನು ಗ್ರಾಮದವರು ಯಾರೂ ನೋಡಿರಲಿಲ್ಲ. ಎರಡ್ಮೂರು ದಿನಗಳ ನಂತರ ಕುರಿಗಾಹಿಯೊಬ್ಬ ನೋಡಿ ಗ್ರಾಮಸ್ಥರಿಗೆ ತಿಳಿಸಿದ್ದಾನೆ.