ಹಾನಗಲ್ಲ ಪಟ್ಟಣದಲ್ಲಿ ಫುಟ್ಪಾತ್ ಅತಿಕ್ರಮಣ (footpath encroachment), ರಿಕ್ಷಾ, ಟೆಂಪೋ ಸೇರಿದಂತೆ ವಿವಿಧ ವಾಹನಗಳ ನಿಲುಗಡೆ ತೆರವುಗೊಳಿಸಲು ಒಂದು ವಾರ ಕಾಲಾವಕಾಶ ನೀಡಲಾಗಿದೆ. ಇಲ್ಲಿರುವ ಕಿರಿದಾದ ರಸ್ತೆಗಳಲ್ಲಿ ವಾಹನ ದಟ್ಟಣೆಯಿಂದ ಸಾರ್ವಜನಿಕರು, ಶಾಲಾ ಮಕ್ಕಳ ಓಡಾಟಕ್ಕೆ ಬಹಳಷ್ಟು ಅನನುಕೂಲವಾಗಿದೆ. ಇದರೊಂದಿಗೆ ರಿಕ್ಷಾಗಳು ಯಾವುದೇ ನಿಯಮ ಪಾಲಿಸದೆ ರಸ್ತೆಯನ್ನೇ ಆವರಿಸಿ ನಿಂತಿರುತ್ತವೆ. ಮಹಾತ್ಮ ಗಾಂಧಿ ವೃತ್ತದವರೆಗೂ ವಿವಿಧ ಅಂಗಡಿಗಳು, ವಾಹನಗಳ ನಿಲುಗಡೆ ಸೇರಿದಂತೆ ಪ್ರಯಾಣಿಕರಿಗೆ ತೀರ ಅನನುಕೂಲವಾಗಿದೆ ಎಂದರು..ಫುಟ್ಪಾತ್ ಅತಿಕ್ರಮಣ, ವಾಹನ ದಟ್ಟಣೆ, ಪಾಕಿಂಗ್ ಸಮಸ್ಯೆ ಪರಿಹರಿಸಲು ಶಾಸಕ ಶ್ರೀನಿವಾಸ ಮಾನೆ ಅವರು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಆದ್ದರಿಂದ ವ್ಯಾಪಾರಸ್ಥರು, ಗೂಡಂಗಡಿಕಾರರು, ವಾಹನಗಳ ಮಾಲೀಕರಿಗೆ ಒಂದು ವಾರ ಸಮಯ ನೀಡಿದ್ದು, ಅಷ್ಟರೊಳಗೆ ತೆರವುಗೊಳಿಸಬೇಕು.