ಶಿವಮೊಗ್ಗ: ಕ್ಲಸ್ಟರ್ ಮಟ್ಟದಲ್ಲಿ ಬಿಸಿಯೂಟ ತಯಾರಿಕೆ ವ್ಯವಸ್ಥೆಯನ್ನು ರೂಪಿಸುವ ಬದಲು ಬಿಸಿಯೂಟ ಸಿಬ್ಬಂದಿಗೆ ಸಂಪೂರ್ಣ ಜವಾಬ್ದಾರಿ ವಹಿಸಬೇಕೆಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಬಿಸಿಯೂಟ ತ. ಬಿಸಿಯೂಟ ತಯಾರಕರ ಜಿಲ್ಲಾ ಸಂಘದ ಅಧ್ಯಕ್ಷೆ ಹನುಮಕ್ಕ ಮಾತನಾಡಿ, ಬಿಸಿಯೂಟ ತಯಾರಿ, ವಿತರಣೆ ಸೇರಿ ಎಲ್ಲ ಕೆಲಸಗಳನ್ನು ಅಡುಗೆ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ. ಆದರೂ ಅವರಿಗೆ ಸೂಕ್ತ ವೇತನ, ಸೌಲಭ್ಯ ಸಿಗುತ್ತಿಲ್ಲ. ಬಿಸಿಯೂಟದ ಜವಾಬ್ದಾರಿಯನ್ನು ಅಡುಗೆ ಸಿಬ್ಬಂದಿಗೆ ವಹಿಸಿ ಗೌರವಧನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.ಮುಖ್ಯ ಅಡುಗೆಯವರು ಹಾಗೂ ಎಸ್ಡಿಎಂಸಿ ಜಂಟಿ ಖಾತೆ ಮೂಲಕ ಯೋಜನೆ ನಿರ್ವಹಿಸಲು ಅವಕಾಶ ನೀಡಬೇಕು.