ಭಾರತೀಯ ಚಿತ್ರರಂಗದ ಹಿರಿಯ ತಾರೆ ಅಮಿತಾಭ್ ಬಚ್ಚನ್ ಸೂಕ್ತ ಭದ್ರತೆಯ ನಡುವೆ ಕಾಣಿಸಿಕೊಂಡಿದ್ದಾರೆ. ಬುಲೆಟ್ಪ್ರೂಫ್ ಗಾಜಿನೊಳಗೆ ನಿಂತು ಅವರು ಅಭಿಮಾನಿಗಳಿಗೆ ದರ್ಶನ ಕೊಡುತ್ತಿದ್ದರೆ, ಪುತ್ರ ಅಭಿಷೇಕ್ ಬಚ್ಚನ್ ತಂದೆಯ ರಕ್ಷಣೆಗೆ ಬಳಿಯೇ ನಿಂತಿದ್ದು ಕಂಡುಬಂತು. ಭಾರತೀಯ ಚಿತ್ರರಂಗದ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಮುಂಬೈ ಬಂಗಲೆಯನ್ನು ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆಯ ಇಮೇಲ್ ಬಂದಿರುವ ಬಗ್ಗೆ ಮುಂಬೈ ಪೊಲೀಸರಿಗೆ ಅಕ್ಟೋಬರ್ 23ರಂದು ಮಾಹಿತಿ ನೀಡಲಾಗಿತ್ತು. ಈ ಬೆದರಿಕೆ ಇಮೇಲ್ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಪ್ರದೇಶದಲ್ಲಿರುವ ಶಾಲೆಯೊಂದಕ್ಕೆ ಬಂದಿತ್ತು. ಈ ಬೆದರಿಕೆ ಪ್ರಕರಣಗಳ ತನಿಖೆ ಸಾಗುತ್ತಿದ್ದು, ಅಮಿತಾಭ್ ಬಚ್ಚನ್ ಅವರೀಗ ಬುಲೆಟ್ಪ್ರೂಫ್ ಗಾಜಿನ ಸಹಾಯ ಪಡೆದಿದ್ದಾರೆ.