ರಾಜಸ್ಥಾನ ರೈಲು ಹಳಿ ಸ್ಫೋಟ ಪ್ರಕರಣ ಹಲವು ತಿರುವು ಪಡೆದಿದೆ. ಪ್ರೀತಿ, ಡ್ರಗ್ಸ್, ಅಕ್ರಮ ಶಸ್ತ್ರಾಸ್ತ್ರ ಮತ್ತು ಪಾಕ್ ಮೂಲದ ಕ್ರಿಮಿನಲ್ ಜಾಲದ ನಂಟು ಬೆಳಕಿಗೆ ಬಂದಿದೆ. ಪಂಜಾಬ್ನ 12ನೇ ತರಗತಿ ವಿದ್ಯಾರ್ಥಿನಿ ಮಹಾಕ್ದೀಪ್ ಕೌರ್ ಮತ್ತು ದೇವಿಂದರ್ ಸಿಂಗ್ ಬಂಧಿತರು. ಪಾಕ್ ಹ್ಯಾಂಡ್ಲರ್ ಸೂಚನೆಯಂತೆ ಐಇಡಿ ಇರಿಸಿದ್ದು, ಇದರ ಹಿಂದೆ 1 ಲಕ್ಷ ರೂ. ಆಮಿಷವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಜೈಪುರ, ನವೆಂಬರ್ 16: ರಾಜಸ್ಥಾನದಲ್ಲಿ ರೈಲ್ವೆ ಹಳಿಯಲ್ಲಿ ನಡೆದ ಸ್ಫೋಟ ಪ್ರಕರಣ ಈಗ ಹಲವು ಕುತೂಹಲಕಾರಿ ತಿರುವುಗಳನ್ನು ಪಡೆದುಕೊಂಡಿದೆ.