ಚಳಿಗಾಲದಲ್ಲಿ ಬೆಳಗಿನ ಎಳೆ ಬಿಸಿಲಿನಲ್ಲಿ ಕುಳಿತುಕೊಳ್ಳುವುದು ಹಿತವೆನಿಸುತ್ತದೆ. ಆದರೆ ಗಂಟೆಗಟ್ಟಲೆ ಬಿಸಿಲಿನಲ್ಲಿ ಕಳೆಯುವುದರಿಂದ ಚರ್ಮದಲ್ಲಿ ಟ್ಯಾನಿಂಗ್, ಶುಷ್ಕತೆ ಮತ್ತು ಕಾಂತಿ ಕಡಿಮೆಯಾಗುವ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಬಿಸಿಲಿನಲ್ಲಿ ಕುಳಿತುಕೊಳ್ಳುವಾಗ ಮಾಡುವ ಈ ನಾಲ್ಕು ತಪ್ಪುಗಳು ನಿಮ್ಮ ಮುಖದ ಸೌಂದರ್ಯದ ಮೇಲೆ ಪರಿಣಾಮ ಬೀರಬಹುದು. ಅವು ಯಾವುವು?. ಚಳಿಗಾಲದಲ್ಲಿ (Winter) ಬೆಳಗಿನ ಎಳೆ ಬಿಸಿಲಿನಲ್ಲಿ ಕುಳಿತುಕೊಳ್ಳಲು ಬಹಳಷ್ಟು ಜನ ಇಷ್ಟಪಡುತ್ತಾರೆ. ಚಳಿಯಿಂದ ಕೊಂಚ ನೆಮ್ಮದಿ ಪಡೆಯಲು ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಮನೆಯ ಟೆರೇಸ್, ಬಾಲ್ಕನಿ ಅಥವಾ ಅಂಗಳದಲ್ಲಿ ಬಿಸಿಲು ಕಾಯಿಸುತ್ತಾರೆ. ಆದರೆ ಚಳಿಗಾಲದ ಬಿಸಿಲು ಮೃದುವಾಗಿ ಕಂಡರೂ ಚರ್ಮದ ಮೇಲೆ ಪರಿಣಾಮ ಬೀರಬಹುದು. ಬಿಸಿಲಿನಲ್ಲಿ ಕುಳಿತುಕೊಳ್ಳುವಾಗ ಅರಿವಿಲ್ಲದೆ ಮಾಡುವ ಕೆಲವು ತಪ್ಪುಗಳಿಂದ ಮುಖದಲ್ಲಿ ಟ್ಯಾನಿಂಗ್ ಉಂಟಾಗಬಹುದು.