ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ಗೆ ಈಗಿನಿಂದಲೇ ರಂಗು ಏರತೊಡಗಿದೆ. ಮಹಾಟೂರ್ನಿಗೆ ಇನ್ನು ಕೆಲವೇ ತಂಡಗಳ ಆಯ್ಕೆ ಬಾಕಿಯಿರುವ ಬೆನ್ನಲ್ಲೇ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅರ್ಹತಾ ಸುತ್ತಿನ ಹೊಸ ಮತ್ತು ರೋಚಕ ಸ್ವರೂಪವನ್ನು ಅಧಿಕೃತವಾಗಿ ಪ್ರಕಟಿಸಿದೆ. ಅರ್ಹತಾ ಸುತ್ತಿನ ಮೂಲಕ ಏಕದಿನ ವಿಶ್ವಕಪ್ನ ಪ್ರಧಾನ ಸುತ್ತಿಗೆ ನೇರವಾಗಿ ಪ್ರವೇಶ ಪಡೆಯಲಿರುವುದು ಕೇವಲ ಒಂದು ತಂಡ (ಚಾಂಪಿಯನ್) ಮಾತ್ರ. ಇನ್ನುಳಿದ ಮೂರು ತಂಡಗಳು ವಿಶ್ವಕಪ್ನ ಆರಂಭಿಕ ಹಂತವಾದ ‘ಸೂಪರ್ ಸೀರೀಸ್’ನಲ್ಲಿ ಕಣಕ್ಕಿಳಿಯಬೇಕಿದೆ. ಈ ಸೀರೀಸ್ನಲ್ಲಿ ಅಗ್ರಸ್ಥಾನ ಪಡೆಯುವ ತಂಡವು ಅಂತಿಮವಾಗಿ 12 ತಂಡಗಳ ಪ್ರಧಾನ ವಿಶ್ವಕಪ್ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದೆ.