ನಟಿ ಶ್ರುತಿ ಹಾಸನ್ ತಮ್ಮ ಮದುವೆಯ ಬಗ್ಗೆ ಕೇಳಿದ ಪ್ರಶ್ನೆಗೆ ಸಂಬಂಧಿಕರಾದ ಸುಹಾಸಿನಿ ಅವರಿಗೆ ನೀಡಿದ ಖಡಕ್ ಉತ್ತರದಿಂದ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದಾರೆ. ನವೆಂಬರ್ 20ರಂದು ಬಿಡುಗಡೆಯಾಗಲಿರುವ ‘ಆಕಾಶಂ ಲೋ ಒಕ ತಾರಾ’ ಚಿತ್ರದ ನಡುವೆ ಈ ವೀಡಿಯೊ ಎಲ್ಲೆಡೆ ವೈರಲ್ ಆಗುತ್ತಿದೆ. ದಕ್ಷಿಣ ಭಾರತದ ಖ್ಯಾತ ನಟಿ ಶ್ರುತಿ ಹಾಸನ್ ಅವರು ತಮ್ಮ ವೃತ್ತಿಜೀವನದ ಜೊತೆಗೆ ದಿಟ್ಟ ಹಾಗೂ ಮುಕ್ತ ಮಾತುಗಳಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಮುಟ್ಟಿನ ಆರೋಗ್ಯ, ಚಿತ್ರರಂಗದಲ್ಲಿನ ತಾರತಮ್ಯ ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆಯೂ ಅವರು ಮುಕ್ತವಾಗಿ ಮಾತನಾಡುತ್ತಾರೆ. ಸದ್ಯ ಅವರ ಮುಂದಿನ ಬಹುನಿರೀಕ್ಷಿತ ‘ಆಕಾಶಂ ಲೋ ಒಕ ತಾರಾ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.