ರಾಜ್ಯದ ಸರಣಿ ಹತ್ಯೆ ಪ್ರಕರಣದಲ್ಲಿ ಏಳು ಶವಗಳನ್ನು ಸಾಗಿಸಲು ಆರೋಪಿ ಇಂದುಶೇಖರ್ 'ಪ್ರೆಸ್' ಹೆಸರನ್ನು ದುರ್ಬಳಕೆ ಮಾಡಿಕೊಂಡ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ತಪಾಸಣೆಯಿಂದ ತಪ್ಪಿಸಿಕೊಳ್ಳಲು ಪತ್ರಿಕೋದ್ಯಮದ ಬ್ಯಾನರ್, ಸ್ಟಿಕ್ಕರ್ ಬಳಸಿದ್ದನು. ಪೊಲೀಸರು ಆತನ ಮಾಸ್ಟರ್ ಪ್ಲ್ಯಾನ್ ಕಂಡು ದಂಗಾಗಿದ್ದಾರೆ. ಇದು ಕರ್ನಾಟಕದಲ್ಲಿ ನಡೆದ ಭಯಾನಕ ಅಪರಾಧದ ತನಿಖೆಯಲ್ಲಿ ಮಹತ್ವದ ತಿರುವು ನೀಡಿದೆ. ಬೆಂಗಳೂರು, ನ.16: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಸರಣಿ ಹತ್ಯೆ ಹಾಗೂ ಏಳು ಶವಗಳ ನಿಗೂಢ ವಿಲೇವಾರಿ ಪ್ರಕರಣದ ತನಿಖೆಯಲ್ಲಿ ಪೊಲೀಸರೇ ದಂಗಾಗುವಂತಹ ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ.