ಫುಕೆಟ್ನ ಪಟೋಂಗ್ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ವಾಹನ ಬಾಡಿಗೆ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿಗೆ 11 ಮಂದಿ ಬಲಿಯಾಗಿದ್ದು, 16 ಜನರಿಗೆ ಗಾಯಗಳಾಗಿವೆ. ಸ್ಥಳೀಯರು ಮಾತ್ರ ಗಾಯಗೊಂಡಿದ್ದು, ಯಾವುದೇ ಪ್ರವಾಸಿಗರಿಗೆ ಹಾನಿಯಾಗಿಲ್ಲ. ಇಂಧನ ಸಂಗ್ರಹದಿಂದ ಬೆಂಕಿ ವೇಗವಾಗಿ ಹರಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಗೆ ನಿಖರ ಕಾರಣಕ್ಕಾಗಿ ತನಿಖೆ ನಡೆಯುತ್ತಿದೆ. ಥೈಲ್ಯಾಂಡ್, ನವೆಂಬರ್ 16: ಥೈಲ್ಯಾಂಡ್ನ ಜನಪ್ರಿಯ ಪ್ರವಾಸಿ ತಾಣವಾದ ಫುಕೆಟ್ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಇಲ್ಲಿನ ಪಟೋಂಗ್ ಪ್ರದೇಶದಲ್ಲಿರುವ ವಾಣಿಜ್ಯ ಕಟ್ಟಡವೊಂದರಲ್ಲಿ ಸೋಮವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ. ಈ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದು, 16 ಜನರು ಗಾಯಗೊಂಡಿದ್ದಾರೆ.