ಗುರುಗ್ರಾಮ್ನ 17ರ ಹರೆಯದ ಅಕ್ಷಿತ್ ಖೇರ್, ಬಡ ಕುಟುಂಬಗಳಿಗಾಗಿ ನವೀನ ಸೌರ ತ್ರಿಚಕ್ರ ವಾಹನವನ್ನು (Solar Tricycle) ರೂಪಿಸಿದ್ದಾರೆ. ಕೇವಲ 13 ಪೈಸೆ/ಕಿ.ಮೀ. ವೆಚ್ಚದಲ್ಲಿ ಚಲಿಸುವ ಈ ಪರಿಸರ ಸ್ನೇಹಿ ವಾಹನವು, ಸರಕು ಸಾಗಣೆಗೆ ಪೆಟ್ಟಿಗೆ, ಸೌರ ಫಲಕವನ್ನು ಹೊಂದಿದೆ. ಹೊಸ ಆವಿಷ್ಕಾರ ಮಾಡಲು ದೊಡ್ಡ ಬಜೆಟ್ ಅಥವಾ ಅತ್ಯಾಧುನಿಕ ಪ್ರಯೋಗಾಲಯ ಬೇಕಿಲ್ಲ; ಆಸಕ್ತಿ, ಪರಿಶ್ರಮ ಮತ್ತು ಕಲಿಯುವ ಬಯಕೆ ಇದ್ದರೆ ಸಣ್ಣ ಕಲ್ಪನೆಯೂ ದೊಡ್ಡ ಆವಿಷ್ಕಾರವಾಗಬಹುದು ಎಂಬ ಸಂದೇಶವನ್ನು 17 ವರ್ಷದ ಅಕ್ಷಿತ್ ಸಾರಿದ್ದಾರೆ.