ಕಪ್ಪು ಲೆದರ್ ಜಾಕೆಟ್, ಸರಳ ಹಿನ್ನೆಲೆಯ ಕತೆಗಳು ಮತ್ತು ಎನ್ವಿಡಿಯಾದ ಯಶಸ್ಸಿಗೆ ಉದ್ಯೋಗಿಗಳೇ ಕಾರಣ ಎಂಬ ವಿನಮ್ರ ಮಾತುಗಳಿಂದ ಸಾರ್ವಜನಿಕವಾಗಿ ಗುರುತಿಸಿಕೊಂಡಿದ್ದ ಎನ್ವಿಡಿಯಾ ಮಾಜಿ ಸಿಇಒ ಜೆನ್ಸನ್ ಹುವಾಂಗ್ ಅವರ ಮುಖವಾಡದ ಹಿಂದಿನ ಮತ್ತೊಂದು ಕರಾಳ ಮುಖ ಇದೀಗ ಬಯಲಾಗಿದೆ. ಸಭೆಗಳ ಕೊಠಡಿಯಲ್ಲಿ ಹಿರಿಯ ಅಧಿಕಾರಿಗಳನ್ನು ಸಾರ್ವಜನಿಕವಾಗಿ ಅವಮಾನಿಸುವುದು, ವಸ್ತುಗಳನ್ನು ಎಸೆಯುವುದು ಮತ್ತು ಭಿನ್ನಾಭಿಪ್ರಾಯಗಳಿಗೆ ತೀವ್ರವಾಗಿ ಸಿಡಿಯುವ ಅವರ ಆಕ್ರಮಣಕಾರಿ ನಾಯಕತ್ವದ ಶೈಲಿಯ ಕುರಿತು ಆಘಾತಕಾರಿ ವರದಿಗಳು ಹೊರಬಿದ್ದಿವೆ.