ಮಹಿಳಾ ಪ್ರೀಮಿಯರ್ ಲೀಗ್ 2027ರ ಮುಂಬೈ ಪಂದ್ಯಗಳಿಗೆ ಬಿಸಿಸಿಐ ಮಹತ್ವದ ಬದಲಾವಣೆ ಮಾಡಿದೆ. ಜನವರಿ 14ರಂದು ಆರಂಭವಾಗಲಿರುವ ಟೂರ್ನಿಯ ಕೊನೆಯ 11 ಪಂದ್ಯಗಳು ಬ್ರಬೋರ್ನ್ ಕ್ರೀಡಾಂಗಣದ ಬದಲಿಗೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿವೆ. ಐಸಿಸಿ ಮನವಿಯ ಮೇರೆಗೆ, ಮುಂಬರುವ ಮಹಿಳಾ ಚಾಂಪಿಯನ್ಸ್ ಟ್ರೋಫಿ ಸಿದ್ಧತೆಗಾಗಿ ಪಿಚ್ ಸಂರಕ್ಷಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಮಹಿಳಾ ಪ್ರೀಮಿಯರ್ ಲೀಗ್ನ ಐದನೇ ಆವೃತ್ತಿ 2027ರ ಜನವರಿ 14ರಂದು ಆರಂಭವಾಗಲಿದ್ದು, ಫೆಬ್ರವರಿ ಮೊದಲ ವಾರದವರೆಗೆ ನಡೆಯಲಿದೆ. ಈಗಾಗಲೇ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಮುಗಿದಿದ್ದು, ಬಿಸಿಸಿಐ ಟೂರ್ನಿಯ ವೇಳಾಪಟ್ಟಿಯನ್ನೂ ಪ್ರಕಟಿಸಿದೆ. ಆದರೆ, ಟೂರ್ನಿ ಆರಂಭಕ್ಕೆ ಎರಡು ತಿಂಗಳು ಬಾಕಿ ಇರುವಾಗ ಬಿಸಿಸಿಐ ಮಹತ್ವದ ಬದಲಾವಣೆಯೊಂದನ್ನು ಮಾಡಿದೆ.