ಕ್ವಾಲ್ಕಾಮ್ ಮತ್ತೊಂದು ಸುತ್ತಿನ ಲೇ ಆಫ್ ಕ್ರಮ ತೆಗೆದುಕೊಂಡಿದೆ. ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾವೊಂದರಲ್ಲಿ ವ್ಯಕ್ತಿಯೊಬ್ಬ ಪೋಸ್ಟ್ ಹಾಕಿದ್ದು, ತನಗೆ ಕೆಲಸ ಹೋಗಿದ್ದು ಖುಷಿಯಾಯಿತು ಎಂದಿದ್ದಾನೆ. ಕೆಲಸ ಯಾತನಾಮಯವಾಗಿತ್ತು. ಈಗ ನಿರಾಳವಾಗಿದೆ. ಜೊತೆಗೆ 15 ತಿಂಗಳ ವೇತನವೂ ಉಚಿತವಾಗಿ ಸಿಕ್ಕಿದೆ ಎಂದಿದ್ದಾನೆ. ನವದೆಹಲಿ, ನವೆಂಬರ್ 15: ಅಮೆರಿಕದ ಚಿಪ್ ತಯಾರಕ ಕಂಪನಿಯಾದ ಕ್ವಾಲ್ಕಾಮ್ನಲ್ಲಿ (Qualcomm) ಲೇಆಫ್ ಮಾಡಲಾಗುತ್ತಿರುವ ಸುದ್ದಿ ಹಲವು ಉದ್ಯೋಗಿಗಳ ಎದೆಯನ್ನು ಡವಡವ ಮಾಡಿಸುತ್ತಿದೆ. ಇನ್ನೂ ಕೆಲವರು, ಯಾವಾಗ ತಮಗೆ ನೋಟೀಸ್ ಬರುತ್ತೋ ಎಂದು ದಿಗಿಲುಗೊಂಡಿದ್ದಾರೆ. ಇದೇ ವೇಳೆ, ಕ್ವಾಲ್ಕಾಮ್ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬ ತನಗೆ ಕೆಲಸ ಹೋಗುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.