ಈಗಾಗಲೇ ನಟರಾದ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮಿತಾಬ್ ಬಚ್ಚನ್ ಇನ್ನೂ ಕೆಲವರಿಗೆ ಸರ್ಕಾರವೇ ಭದ್ರತೆ ಒದಗಿಸುತ್ತಿದೆ. ಸಲ್ಮಾನ್ ಖಾನ್ ಅವರಿಗೆ ನೀಡಲಾಗುತ್ತಿದ್ದ ಭದ್ರತೆಯನ್ನು ಹೆಚ್ಚಿಸಿ ವೈ ಪ್ಲಸ್ ಭದ್ರತೆಯನ್ನು ನೀಡುತ್ತಿದೆ. ಶಾರುಖ್ ಖಾನ್ ಅವರಿಗೂ ಸಹ ವೈ ಪ್ಲಸ್ ಭದ್ರತೆಯನ್ನೇ ನೀಡಲಾಗುತ್ತಿದೆ. ಅಮಿತಾಬ್ ಬಚ್ಚನ್ ಹಾಗೂ ಅಮಿತಾಬ್ ಬಚ್ಚನ್ ಅವರಿಗೆ ಎಕ್ಸ್ ಕ್ಯಾಟಗರಿ ಭದ್ರತೆಯನ್ನು ಮಹಾರಾಷ್ಟ್ರ ಸರ್ಕಾರ ನೀಡುತ್ತಿದೆ. ಬಾಲಿವುಡ್ ಮೇಲೆ ಭೂಗತ ಲೋಕದ ಕರಿನೆರಳು ಬಿದ್ದಿದೆ.