ಥೈಲ್ಯಾಂಡ್ನ ರಸ್ತೆಯೊಂದರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ. ಹೌದು, ಟೆಸ್ಲಾ ಕಾರು ಚಾಲಕನೊಬ್ಬ ರಸ್ತೆ ದಾಟಲು ಕಾಯುತ್ತಿರುವ ಪಾದಚಾರಿಯನ್ನು ನೋಡಿ ಕಾರನ್ನು ನಿಲ್ಲಿಸಿದ್ದಾನೆ. ಭಾರತೀಯ ವ್ಯಕ್ತಿಯೊಬ್ಬ ಥೈಲ್ಯಾಂಡ್ನ ರಸ್ತೆ ವ್ಯವಸ್ಥೆ ಹಾಗೂ ಸಾರ್ವಜನಿಕ ನಡವಳಿಕೆಯನ್ನು ಶ್ಲಾಘಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ. ರಸ್ತೆಯಲ್ಲಿ ಒಂದರ ಹಿಂದೆ ಒಂದರಂತೆ ಸಾಲಾಗಿ ವಾಹನಗಳು ಬಂದು ಬಿಟ್ಟರೆ ಮುಗಿದೇ ಹೋಯ್ತು. ಯಾರೇ ಆದ್ರೂ ಒಂದು ಕ್ಷಣ ಹೇಗೆ ರಸ್ತೆ ದಾಟುವುದು ಎಂದು ಯೋಚಿಸುತ್ತಾರೆ. ಆದರೆ ಇದೀಗ ಥೈಲ್ಯಾಂಡ್ನ (Thailand) ಟೆಸ್ಲಾ ಕಾರು ಚಾಲಕನೊಬ್ಬ ರಸ್ತೆ ದಾಟಲು ಕಾಯುತ್ತಿರುವ ಪಾದಚಾರಿಗೆ ಕಂಡೊಡನೆ ತನ್ನ ಕಾರನ್ನು ನಿಲ್ಲಿಸುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾನೆ.