ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಸಿದ್ದಸಿರಿ ಮಲ್ಟಿ ಸ್ಟೇಟ್ ಸಹಕಾರಿ ಸಂಘದ ಮೇಲೆ ಇಡಿ/ಐಟಿ ದಾಳಿ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಇವು ರಾಜಕೀಯ ವಿರೋಧಿಗಳ ಸುಳ್ಳು ಪ್ರಚಾರವೆಂದು ಸ್ಪಷ್ಟಪಡಿಸಿದ್ದು, ಭ್ರಷ್ಟಾಚಾರ ಸಾಬೀತುಪಡಿಸಿದರೆ 1 ಕೋಟಿ ರೂ. ಬಹುಮಾನ ನೀಡುವುದಾಗಿ ಸವಾಲು ಹಾಕಿದ್ದಾರೆ. ಸೊಸೈಟಿಯ ಆಸ್ತಿ ಕುಟುಂಬದ ಹೆಸರಿನಲ್ಲಿಲ್ಲ, ಗ್ರಾಹಕರ ಹಣ ಸುರಕ್ಷಿತವಾಗಿದೆ ಎಂದೂ ಭರವಸೆ ನೀಡಿದ್ದಾರೆ. ವಿಜಯಪುರ, ನ.15: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ಸಂಸ್ಥಾಪನೆಯ, ಪುತ್ರ ರಾಮನಗೌಡ ಪಾಟೀಲ್ ಅಧ್ಯಕ್ಷರಾಗಿರುವ 'ಸಿದ್ದಸಿರಿ ಮಲ್ಟಿ ಸ್ಟೇಟ್ ಮಲ್ಟಿ ಪರ್ಪಸ್ ಕೋ-ಆಪರೇಟಿವ್ ಸೊಸೈಟಿ' ಮೇಲೆ ಕೇಂದ್ರದ ಹಣಕಾಸು ಸಂಸ್ಥೆಗಳು (ED-IT) ದಾಳಿ ನಡೆಸಿವೆ ಎಂಬ ವಂತಿಗಳ ಕುರಿತು ಶಾಸಕ.