Minister G Parameshwara felicitated Tumakuru rifle shooters selected for the 70th National Shooting Championship. ರಾಷ್ಟ್ರೀಯ ಚಾಂಪಿಯನ್ಶಿಪ್ಗೆ ಆಯ್ಕೆಯಾದ ತುಮಕೂರು ರೈಫಲ್ ಶೂಟರ್ಗಳನ್ನು ಸನ್ಮಾನಿಸಿದ ಸಚಿವ ಜಿ ಪರಮೇಶ್ವರ. ತುಮಕೂರು: ರಾಜ್ಯ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಗೆದ್ದಿರುವ ತುಮಕೂರು ಜಿಲ್ಲೆಯ ಕ್ರೀಡಾಪಟುಗಳು ಇದೀಗ ರಾಷ್ಟ್ರಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ. ಕ್ರೀಡಾ ಕ್ಷೇತ್ರ, ತುಮಕೂರು ಹಾಗೂ ರಾಜ್ಯವೇ ಹೆಮ್ಮೆ ಪಡುವಂತೆ ಮಾಡಿದ ಕ್ರೀಡಾಪಟುಗಳನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಶ್ಲಾಘಿಸಿದರು.ಜಿಲ್ಲೆಯ ಗೊಲ್ಲಹಳ್ಳಿನ ತಮ್ಮ ನಿವಾಸದಲ್ಲಿ ಭಾನುವಾರ ರೈಫಲ್ ಶೂಟಿಂಗ್ ಕ್ರೀಡಾಪಟುಗಳಾದ ಚಿಂತನ್, ಸಮರ, ವನಿತಾ, ಲಾಸ್ಯ ಪ್ರಿಯ, ಜಿತೇಶ್ ಮತ್ತು ಫನಾನ್ ಅವರನ್ನು ಅಭಿನಂದಿಸಿದರು.