ಬಾಗಲಕೋಟೆ : ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ ಈಚೆಗೆ ನಡೆದ 17ನೇ ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಮೈಸೂರಿನ ತೋಟಗಾರಿಕೆ ಮಹಾವಿದ್ಯಾಲಯವೂ ಸಮಗ್ರ ವೀರಾಗ್ರಣಿ ಪ್ರಶಸ್ತ. ಎರಡೂ ತಂಡಗಳಿಗೂ ಸಮಾರೋಪ ಸಮಾರಂಭದಲ್ಲಿ ತೋವಿವಿ ಕುಲಪತಿ ಡಾ. ವಿಷ್ಣುವರ್ಧನ ಹಾಗೂ ಇಲ್ಲಿನ ಕೆನರಾ ಬ್ಯಾಂಕಿನ ಎಜಿಎಂ ಯೋಗೇಶ ಪೂಜಾರಿ ಟ್ರೋಫಿಯನ್ನು ವಿತರಿಸಿದರು. ವಿಷ್ಣುವರ್ಧನ, ಸರ್ವತೋಮುಖ ಬೆಳವಣಿಗೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಮುಖ್ಯವಾಗಿದೆ. ವಿದ್ಯಾರ್ಥಿಗಳು ಒಂದಲ್ಲ ಒಂದು ಕ್ರೀಡೆಗಳಲ್ಲಿ ಭಾಗವಹಿಸಿದಾಗ ಮಾತ್ರ ಗುಣಮಟ್ಟದ ಅಧ್ಯಯನ ಹಾಗೂ ಜ್ಞಾನ ಪಡೆಯಬಹುದು. ಕೆನರಾ ಬ್ಯಾಂಕಿನ ಎಜಿಎಂ ಯೋಗೇಶ ಪೂಜಾರಿ ಮಾತನಾಡಿ, ಈ ಸಮಯವನ್ನು ನೋಡಿದರೆ ನನಗೆ ನನ್ನ ಕಾಲೇಜಿನ ಹಳೆಯ ದಿನಗಳು ಮರುಕಳಿಸುತ್ತಿವೆ.