Tiger Shroff Firing: ನಟ ಟೈಗರ್ ಶ್ರಾಫ್ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಕುರಿತು ಮಾತನಾಡಿರುವ ನಟಿ ಅನನ್ಯಾ ಪಾಂಡೆ, ಇದೊಂದು ಭಯಾನಕ ಮತ್ತು ದುರದೃಷ್ಟಕರ ಘಟನೆ ಎಂದು ಬೇಸರ ವ್ಯಕ್ತಪಡಿಸಿದ್ದ. ಅಲ್ಲದೆ, ಎಲ್ಲರಿಗೂ ಸುರಕ್ಷತೆ ಸಿಗುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.ಇದೇ ವೇಳೆ, ಕೇವಲ ಸೆಲೆಬ್ರಿಟಿಗಳ ಸುರಕ್ಷತೆ ಮಾತ್ರ ಮುಖ್ಯವಲ್ಲ. ನೆಚ್ಚಿನ ತಾರೆಯರನ್ನು ಕಣ್ತುಂಬಿಕೊಳ್ಳಲು ಬರುವ ಅಭಿಮಾನಿಗಳು ಮತ್ತು ಸುತ್ತಮುತ್ತಲಿರುವ ಜನಸಾಮಾನ್ಯರ ಜೀವದ ಭದ್ರತೆಯೂ ಅಷ್ಟೇ ಮುಖ್ಯ’ ಎಂದು ಅನನ್ಯಾ ಪಾಂಡೆ ಕಳವಳ ವ್ಯಕ್ತಪಡಿಸಿದ್ದಾರೆ.