ದೀರ್ಘಕಾಲದಿಂದ ಮುಂದುವರಿದಿರುವ ಯುದ್ಧದ ಪರಿಣಾಮವಾಗಿ ಇರಾನ್ನಲ್ಲಿ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಕುಸಿದಿದ್ದು, ತೀವ್ರ ಹಸಿವಿನಿಂದ ಮತ್ತು ಹಣಕಾಸಿನ ಮುಗ್ಗಟ್ಟಿನಿಂದ ಕಂಗೆಟ್ಟಿರುವ ಅಲ್ಲಿನ ಜನರು ಜೀವನ ನಿರ್ವಹಣೆಗಾಗಿ ತಮ್ಮ ದೇಹದ ಅಂಗಾಂಗಗಳನ್ನೇ ಮಾರಾಟಕ್ಕಿಡುವ ಹೃದಯವಿದ್ರಾವಕ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಂತಾರಾಷ್ಟ್ರೀಯ ವರದಿ ಬಹಿರಂಗಪಡಿಸಿದೆ. ಯುದ್ಧದ ತೀವ್ರತೆಯಿಂದಾಗಿ ಉದ್ಯೋಗ ನಷ್ಟ, ಗಗನಕ್ಕೇರಿದ ಬೆಲೆಗಳು ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ಅನೇಕ ಇರಾನಿಯನ್ನರು, ತಮ್ಮ ಕುಟುಂಬವನ್ನು ಪೋಷಿಸಲು ಹಾಗೂ ಸಾಲ ತೀರಿಸಲು ಮೂತ್ರಪಿಂಡ, ಯಕೃತ್ತಿನ ಭಾಗ ಹಾಗೂ ಮೂಳೆ ಮಜ್ಜೆಯಂತಹ ಅಂಗಾಂಗಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.