ಸಾಲಿಗ್ರಾಮ: ತಾಲೂಕಿನ ದೇವಿತಂದ್ರೆ ಗ್ರಾಮದಲ್ಲಿ ಶ್ರೀ ಸಪ್ತಮಾತೃಕೆ ದೇವಿರಮ್ಮ ತಾಯಿಯ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ನಡುವೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು. ರ. ಈ ಉತ್ಸವದಲ್ಲಿ ತಂದ್ರೆಯಿಂದ ಎರಡು ಹಾಗೂ ತಂದ್ರೆ ಅಂಕನಹಳ್ಳಿ ಮತ್ತು ಗೊಹಳ್ಳಿ ಗ್ರಾಮಗಳಿಂದ ತಲಾ ಒಂದು ಸಿಡಿಗಳನ್ನು ವಿಶೇಷ ಅಲಂಕಾರ ಮಾಡಿಕೊಂಡು ದೇವಾಲಯದ ಆವರಣಕ್ಕೆ ಕರೆತಂದು ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡಸ್ವಾಮೇಗೌಡ ಸಿಡಿ ಉತ್ಸವಕ್ಕೆ ಚಾಲನೆ ನೀಡಿದರು. ನಂತರ ಸಪ್ತ ಮಾತೃಕೆ ದೇವಿರಮ್ಮ ತಾಯಿ ದೇವಾಲಯವನ್ನು ಮೂರು ಬಾರಿ ಪ್ರದಕ್ಷಣೆ ಮಾಡಿ ಸಿಡಿಗಳನ್ನು ಮೂಲ ಸ್ಥಾನಗಳಿಗೆ ಕರೆದೊಯ್ಯಲಾಯಿತು..