ಬೆಂಗಳೂರು: ಇಂದಿನ ಪೀಳಿಗೆ ಕನ್ನಡದ ಬಳಕೆ ಕಡಿಮೆ ಮಾಡುತ್ತಿರುವುದು ಕಳವಳ ವಿಚಾರ. ಮನೆಯೊಳಗೆ ಕನ್ನಡವೇ ಪ್ರಧಾನ ಭಾಷೆಯಾಗಬೇಕು. ಪಾಲಕರು ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡುವ ಮೂಲಕ ಭಾಷೆಯನ್ನು ಮ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾಷೆಯ ಪ್ರಾಚೀನತೆ, ಕರ್ನಾಟಕದ ಇತಿಹಾಸ, ಕನ್ನಡ ಮತ್ತು ಕರ್ನಾಟಕ ಪದಗಳ ಉಗಮ ಹಾಗೂ ಭುವನೇಶ್ವರಿಗೂ ಕನ್ನಡ ನಾಡಿಗೂ ಸಾಂಸ್ಕೃತಿಯ ಸಂಬಂಧ ಇದೆ ಎಂದು ತಿಳಿಸಿದರು. ಸುವಾರು 35,000 ಕನ್ನಡ ಶಿಲಾಶಾಸನಗಳು, ಪ್ರಾಚೀನ ಹಸ್ತಪ್ರತಿಗಳು ಮತ್ತು ತಾಳೆಗರಿಗಳನ್ನು ಡಿಜಿಟಲೀಕರಣಗೊಳಿಸಬೇಕು.