ಕ್ರಿಕೆಟ್ ಜಗತ್ತಿನಲ್ಲಿ ಕೆಲವು ದಾಖಲೆಗಳು ಪೂರ್ಣಗೊಂಡಾಗ ಸಂಭ್ರಮವಾದರೆ, ಇನ್ನು ಕೆಲವು ಅಪೂರ್ಣವಾಗಿ ಉಳಿದಾಗ ಕಾಡುವ ಭಾವನೆಯೇ ಬೇರೆ. ಭಾರತೀಯ ಕ್ರಿಕೆಟ್ನ ಎರಡು ಆಧಾರಸ್ತಂಭಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ, ನ್ಯೂಝಿಲೆಂಡ್ ನೆಲದಲ್ಲಿ ತಮ್ಮ ಕೊನೆಯ ಏಕದಿನ ಅಧ್ಯಾಯವನ್ನು ಮುಗಿಸಿದ್ದಾರೆ. ದಶಕಗಳ ಕಾಲ ವಿಶ್ವ ಕ್ರಿಕೆಟ್ ಆಳಿದ ಈ 'ರೋ-ಕೊ' ಜೋಡಿ, ಕಿವೀಸ್ ನಾಡಿಗೆ ವಿದಾಯ ಹೇಳುವ ಹೊತ್ತಿನಲ್ಲಿ ತಲಾ ಒಂದೊಂದು ಅಪರೂಪದ 'SENA' ದಾಖಲೆಯನ್ನು ಕೈಚೆಲ್ಲಿರುವುದು ಅಭಿಮಾನಿಗಳಲ್ಲಿ ಸಣ್ಣದೊಂದು ಬೇಸರ ಮೂಡಿಸಿದೆ.