ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿ ವಿಚ್ಛೇದಿತ ಮಹಿಳೆಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಐದು ತಿಂಗಳು ಲವ್ ಮಾಡಿ ಬಳಿಕ ಮದುವೆ ಆಗಲ್ಲ ಅಂತ ಹೇಳಿ ಪ್ರಿಯಕರ ಪರಾರಿ ಆಗಿದ್ದಾನೆ. ಇತ್ತ ಆತನಿಗಾಗಿ ಹುಡುಕಿ ಹುಡುಕಿ ಸುಸ್ತಾದ ಮಹಿಳೆ ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಬೆಂಗಳೂರು, ನವೆಂಬರ್ 15: ಮದುವೆಯಾಗುವುದಾಗಿ ನಂಬಿಸಿ ವಿಚ್ಛೇದಿತ ಮಹಿಳೆಗೆ ಹೈದರಾಬಾದ್ ಮೂಲದ ವ್ಯಕ್ತಿ ವಂಚಿಸಿರುವ ಆರೋಪವೊಂದು ಕೇಳಿಬಂದಿದೆ. ಹಲವಾರು ಬಾರಿ ದೈಹಿಕ ಸಂಪರ್ಕ ಬೆಳಸಿ, ದುಬಾರಿ ಬೈಕ್, ಐಫೋನ್ ಗಿಫ್ಟ್ ಪಡೆದುಕೊಂಡು ಕೊನೆಗೆ ಊರು ಬಿಟ್ಟು ಪರಾರಿ ಆಗಿದ್ದಾನೆ.