ಕಲಬುರಗಿಯಲ್ಲಿ ಕೆಎಎಸ್ ಪರೀಕ್ಷೆ ಬರೆಯಲು ಬಂದಿದ್ದ ಮಹಿಳಾ ಅಭ್ಯರ್ಥಿಯೊಬ್ಬರು ಕಳೆದ ತಿಂಗಳ ವಿಎಒ ಪರೀಕ್ಷೆಯ ಹಾಲ್ ಟಿಕೆಟ್ ತಂದು ಎಡವಟ್ಟು ಮಾಡಿಕೊಂಡಿದ್ದಾರೆ. ಇದರಿಂದ ಅವರು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೆ ವಾಪಸ್ ತೆರಳಿದ್ದಾರೆ. ಸಣ್ಣ ಎಡವಟ್ಟಿನಿಂದ ಪರೀಕ್ಷೆ ತಪ್ಪಿಸಿಕೊಂಡು ನಿರಾಶೆಗೊಂಡಿದ್ದಾರೆ. ದೂರದ ಊರಿನಿಂದ ಬಂದ ಅಭ್ಯರ್ಥಿಗಳಿಗೆ ಇದು ಮತ್ತಷ್ಟು ಸಂಕಷ್ಟ ತಂದಿದೆ. ಕಲಬುರಗಿ, ನವೆಂಬರ್ 15: ಭಾನುವಾರ ರಾಜ್ಯದ 345 ಪರೀಕ್ಷಾ ಕೇಂದ್ರಗಳಲ್ಲಿ KPSCಯಿಂದ 319 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆ ನಡೆಯುತ್ತಿದೆ. ಕಲಬುರಗಿಯ ಪರೀಕ್ಷಾ ಕೇಂದ್ರಕ್ಕೆ ಬಂದ ಅಭ್ಯರ್ಥಿ ಕೆಎಎಸ್ ಪರೀಕ್ಷೆಗೆ ವಿಎಓ ಹಾಲ್ ಟಿಕೆಟ್ ತೆಗೆದುಕೊಂಡು ಬಂದಿದ್ದಾರೆ.