SpaceX Makes History: ಸ್ಪೇಸ್ಎಕ್ಸ್ ಸಂಸ್ಥೆಯು ಸ್ಟಾರ್ಶಿಪ್ ರಾಕೆಟ್ನ ಬೂಸ್ಟರ್ ಅನ್ನು ಉಡಾವಣಾ ಪ್ಯಾಡ್ನ ದೈತ್ಯ ರೋಬೋಟಿಕ್ ತೋಳುಗಳ (Mechanical Arms) ಸಹಾಯದಿಂದ ಮೊದಲ ಬಾರಿಗೆ ಯಶಸ್ವಿಯಾಗಿ ಹಿಡಿಯುವ ಮೂಲಕ ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಈ ಮೊದಲು ಮೂರು ಬಾರಿ ಫಾಲ್ಕನ್ ರಾಕೆಟ್ಗಳನ್ನು ಭೂಮಿಯಲ್ಲಿ ಯಶಸ್ವಿಯಾಗಿ ಹಿಡಿದಿಡಲಾಗಿತ್ತು. ಆದರೆ, ಸ್ಟಾರ್ಶಿಪ್ ಪ್ರಯೋಗವು ತಂತ್ರಜ್ಞಾನ ಕ್ಷೇತ್ರಕ್ಕೆ ಹೊಸ ಮೈಲಿಗಲ್ಲಾಗಿದೆ. ಟೆಕ್ಸಾಸ್, ಅಮೆರಿಕ, ನವೆಂಬರ್ 15: ಇಲಾನ್ ಮಸ್ಕ್ ಅವರ ಸ್ಪೇಸ್ಎಕ್ಸ್ (SpaceX) ಸಂಸ್ಥೆ ತನ್ನ ಸಾಧನೆಗಳ ಓಟ ಮುಂದುವರಿಸಿದೆ. ಇವತ್ತು ಆ ಸಂಸ್ಥೆ ಹಾಗು ತಂತ್ರಜ್ಞಾನ ಕ್ಷೇತ್ರಕ್ಕೆ ಹೊಸ ಪುಷ್ಟಿ ದೊರಕಿದೆ.