ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಚೌಡನಾಯಕನಪಾಳ್ಯದಲ್ಲಿ ಪತಿ-ಪತ್ನಿ ಜಗಳಕ್ಕೆ 16 ವರ್ಷದ ಪುತ್ರ ಬಲಿಯಾಗಿದ್ದಾನೆ. ಮಗನನ್ನು ನನ್ನು ತಂದೆಯೇ ಹಾರೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ದಾಂಪತ್ಯ ಕಲಹ ವಿಚಾರವಾಗಿ ಆರೋಪಿ ಈ ಹಿಂದೆ ಜೈಲಿಗೂ ಹೋಗಿ ಬಂದಿದ್ದ ಎನ್ನಲಾಗಿದ್ದು, ಸದ್ಯ ಆತನನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ. ತುಮಕೂರು, ನವೆಂಬರ್ 15: ಹಾರೆಯಿಂದ ಹೊಡೆದು ಸ್ವಂತ ಮಗನನ್ನು ತಂದೆಯೇ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಚೌಡನಾಯಕನಪಾಳ್ಯದಲ್ಲಿ ನಡೆದಿದೆ. ಪತಿ-ಪತ್ನಿ ನಡುವಿನ ಜಗಳಕ್ಕೆ 16 ವರ್ಷದ ಪುತ್ರ ಸುನೀಲ್ ಬಲಿಯಾಗಿದ್ದು, ಆರೋಪಿಯನ್ನು ನಂಜಪ್ಪ ಎಂದು ಗುರುತಿಸಲಾಗಿದೆ.