ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಬಂದರೆ ದಾಖಲೆಗಳು ಪುಡಿಯಾಗುವುದು ಸಾಮಾನ್ಯ. ಆದರೆ ನ್ಯೂಝಿಲೆಂಡ್ ಪ್ರವಾಸದಲ್ಲಿ ನಡೆದಿದ್ದೇ ಬೇರೆ. 13 ವರ್ಷಗಳ ನಂತರ ಕಿಂಗ್ ಕೊಹ್ಲಿ ಕೆರಿಯರ್ನಲ್ಲಿ ಅತ್ಯಂತ ಅಪರೂಪದ ಬ್ಯಾಟಿಂಗ್ ವೈಫಲ್ಯವೊಂದು ಎದುರಾಗಿದೆ. ಅಷ್ಟಕ್ಕೂ ಏನಿದು ಅನಪೇಕ್ಷಿತ ದಾಖಲೆ? ಇಲ್ಲಿದೆ ಸಂಪೂರ್ಣ ವಿವರ. ಭಾರತ ಕ್ರಿಕೆಟ್ ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ 2026ರ ನ್ಯೂಝಿಲೆಂಡ್ ಪ್ರವಾಸದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಅಪರೂಪದ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಸರಣಿಯ ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಭರ್ಜರಿ ಆರಂಭ ಪಡೆದಿದ್ದ ಕೊಹ್ಲಿ, ನಂತರದ ಮೂರು ಇನ್ನಿಂಗ್ಸ್ಗಳಲ್ಲಿ ಒಂದಂಕಿ ಮೊತ್ತಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದಾರೆ.