ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳುವುದು ಕೇವಲ ಫ್ಯಾಷನ್ ಅಲ್ಲ, ದೃಷ್ಟಿ ದೋಷ, ನಕಾರಾತ್ಮಕ ಶಕ್ತಿ ಹಾಗೂ ಶನಿ, ರಾಹು, ಕೇತು ಗ್ರಹಗಳ ದುಷ್ಪರಿಣಾಮಗಳಿಂದ ರಕ್ಷಣೆ ನೀಡುತ್ತದೆ. ಕಾಲಭೈರವನ ಸಂಕೇತವಾಗಿರುವ ಈ ದಾರವನ್ನು ಸರಿಯಾದ ನಿಯಮದಂತೆ (ಒಂಬತ್ತು ಗಂಟು, ಯಾವ ಕಾಲು) ಕಟ್ಟಿಕೊಂಡರೆ ಆಧ್ಯಾತ್ಮಿಕ ಪ್ರಯೋಜನಗಳನ್ನು ಪಡೆಯಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ಅನೇಕ ಆಚರಣೆಗಳು ತಲೆಮಾರುಗಳಿಂದ ನಡೆದುಕೊಂಡು ಬಂದಿವೆ. ಅವುಗಳಲ್ಲಿ ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳುವುದು ಕೂಡ ಒಂದು. ಇತ್ತೀಚಿನ ದಿನಗಳಲ್ಲಿ ಯುವಜನತೆ ಇದನ್ನು ಫ್ಯಾಷನ್ ಆಗಿಯೂ ಧರಿಸುತ್ತಾರೆ.