ಡೆಹ್ರಾಡೂನ್: ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ಐತಿಹಾಸಿಕ 'ಜೌಲ್ಜೀಬಿ ಮೇಳ'ದಲ್ಲಿ ಶನಿವಾರ(ನ. 14) ಕಾಂಗ್ರೆಸ್ ಶಾಸಕ ಹರೀಶ್ ಸಿಂಗ್ ಧಾಮಿ ಸಿಎಂ ಪುಷ್ಕರ್ ಸಿಂಗ್ ಧಾಮಿ ವಿರುದ್ಧ ಮಾತನಾಡುವಾಗ ಮೈಕ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕಾರ್ಯಕ್ರಮದ ಸ್ಥಳದಿಂದ ನಿರ್ಗಮಿಸಿದ ಬಳಿಕ ಈ ಘಟನೆ ನಡೆದಿದೆ. ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹರೀಶ್ ಸಿಂಗ್ ಅಧ್ಯಕ್ಷೀಯ ಭಾಷಣ ಮಾಡುವ ವೇಳೆ ಪುಷ್ಕರ್ ಸಿಂಗ್ ಧಾಮಿ ಅವರ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿದರು. ಮತ್ತು ಅವರನ್ನು ಹೇಡಿ ಎಂದು ಕರೆದು, ಮುಂದಿನ ಚುನಾವಣೆಯಲ್ಲಿ ಧಾರ್ಚುಲಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸವಾಲು ಹಾಕಿದರು.