ನವದೆಹಲಿ: 2024ರಲ್ಲಿ ವಿದ್ಯಾರ್ಥಿಗಳ ದಂಗೆ ಬಳಿಕ ಪ್ರಧಾನಿ ಸ್ಥಾನದಿಂದ ಪದಚ್ಯುತಗೊಂಡು ಬಾರತಕ್ಕೆ ಬಂದು ತಲೆ ಮರೆಸಿಕೊಂಡಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಮರಳಿ ಢಾಕಾಗೆ. ಎರಡನೇಯಾದಾಗಿ ಬಾಂಗ್ಲಾ 2024ರ ದಂದೆಯ ಸಮಯದ ಕೊಲೆ ಆರೋಪಗಳ ಕುರಿತು ಹೊಸ ವಿಚಾರಣೆಯನ್ನು ನಡೆಸಬೇಕು. ಶೇಖ್ ಹಸೀನಾ ಅವರಿಗೆ ತಮ್ಮ ಮರಣದಂಡನೆಯ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಶ ನೀಡಬೇಕೆಂದು ಹೇಳಿದೆ ಎಂದು ವರದಿ ಉಲ್ಲೇಖಿಸಿದೆ.ಇನ್ನೂ ಇತ್ತೀಚೆಗೆ ಸುದ್ದಿ ಸಂಸ್ಥೆ IANSಗೆ ನೀಡಿದ ಆಡಿಯೋ ಸಂದರ್ಶನದಲ್ಲಿ ಮಾತನಾಡಿರುವ ಶೇಖ್ ಹಸೀನಾ, ಬಂಧನ, ಜೈಲು ಶಿಕ್ಷೆ ಅಥವಾ ಸಾವಿನ ಬೆದರಿಕೆ ನಾನು ದೇಶಕ್ಕೆ ಮರಳವುದನ್ನು ತಡೆಯಲು ಸಾಧ್ಯವಿಲ್ಲ.