ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ನವೆಂಬರ್ 15, 2026 ರ ಭಾನುವಾರದ ದಿನಭವಿಷ್ಯವನ್ನು ನೀಡಿದ್ದಾರೆ. ಈ ದಿನದ ಗ್ರಹಗತಿಗಳು ಮತ್ತು ನಕ್ಷತ್ರಗಳ ಆಧಾರದ ಮೇಲೆ ಎಲ್ಲಾ ಹನ್ನೆರಡು ರಾಶಿಗಳಿಗೂ ವೃತ್ತಿ, ಆರ್ಥಿಕತೆ, ಆರೋಗ್ಯ ಮತ್ತು ಕುಟುಂಬದಲ್ಲಿನ ಪರಿಣಾಮಗಳನ್ನು ವಿವರಿಸಿದ್ದಾರೆ. ಜೊತೆಗೆ ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಸೂರ್ಯ ಮಂತ್ರಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ನವೆಂಬರ್ 15, 2026 ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಪರಾಭವನಾಮ ಸಂವತ್ಸರ, ದಕ್ಷಿಣಾಯಣ, ಕಾರ್ತಿಕ ಮಾಸದ ಶುಕ್ಲ ಪಕ್ಷದ ಷಷ್ಠಿ ತಿಥಿಯ ಈ ಶುಭ ದಿನದಂದು ಉತ್ತರಾಷಾಢ ನಕ್ಷತ್ರ ಇರಲಿದೆ.